Keblinger

Keblinger
| Friday, March 25, 2011

ಯುವ್ವಿ, ಯಾರದು ನಿಮ್ಮ ಪ್ರೇರಕ ವ್ಯಕ್ತಿ ?

ಅಹಮದಾಬಾದ್, ಮಾ. 25: ಹಾಲಿ ವಿಶ್ವ್ ಕಪ್-ನಲ್ಲಿ ಅದ್ಭುತ ಫಾರಂಗೆ ಮರಳಿರುವ ಯುವರಾಜ ಸಿಂಗ್ 'ವಿಶೇಷ ವ್ಯಕ್ತಿ'ಯೊಬ್ಬರಿಂದಾಗಿ ಈ ಪ್ರದರ್ಶನ ನೀಡುತ್ತಿರುವುದಾಗಿ ಘೋಷಿಸಿದ್ದಾರೆ. ಆದರೆ ಆ ವ್ಯಕ್ತಿ ಯಾರು ಎಂಬ ಗುಟ್ಟು ಬಿಟ್ಟು ಕೊಟ್ಟಿಲ್ಲ. 'ನಾನು ಒಬ್ಬ ನಿರ್ದಿಷ್ಟ ವ್ಯಕ್ತಿಗಾಗಿ, ವ್ಯಕ್ತಿಯಿಂದಾಗಿ ಆಡುತ್ತಿರುವೆ. ನನ್ನ ಆಟ ಲಯ ತಪ್ಪುತ್ತಿದೆ ಎನಿಸಿದಾಗ ನಾನು ಆ ವ್ಯಕ್ತಿಯನ್ನು ನೆನಪಿಸಿಕೊಳ್ಳುತ್ತೇನೆ. ಮುಂದಿನದೆಲ್ಲ ನನಗೆ ಸಲೀಸೋ ಸಲೀಸು. ಆತನೇ ನನ್ನ ಪ್ರೇರಕ ಶಕ್ತಿ' ಎಂದು ಮೇಲಿಂದ ಮೇಲೆ ಪಂದ್ಯ ಪುರುಷೋತ್ತಮ ಎನಿಸುತ್ತಿರುವ ಯುವ್ವಿ ಹೇಳಿಕೊಂಡಿದ್ದಾರೆ. 
''ಒಂದು ವರ್ಷದಿಂದ ಪಂದ್ಯದ ಕೊನೆಯವರೆಗೂ ನಿಂತು ಆಡುವ ಕನಸು ಕಾಣುತ್ತಿದ್ದೇನೆ. ಆಸ್ಟ್ರೇಲಿಯಾವನ್ನು ಬಗ್ಗುಬಡಿದು ವಿಶ್ವ ಕಪ್ ಗೆಲ್ಲುವುದರ ಬಗ್ಗೆಯೇ ಯೋಚಿಸುತ್ತಿದ್ದೇನೆ. ನನ್ನ ಕನಸೀಗ ಒಂದು ಹಂತಕ್ಕೆ ಬಂದಿದೆ. ಖಂಡಿತ ಅದು ಮುಂದುವರಿಯಲಿದೆ' ಎಂದು ಆಸ್ಟ್ರೇಲಿಯಾ ಅಹಮದಾಬಾದ್ ಪಂದ್ಯದ ನಂತರ ಯುವ್ವಿ ಗುರುವಾರ ಹೇಳಿದ್ದರು.ಯುವ್ವಿ ಮನಸ್ಸನ್ನು ಅರ್ಥ ಮಾಡಿಕೊಂಡು ಯಾವುದಾದರೂ ಮೂರು ಹೆಸರುಗಳನ್ನು ಸೂಚಿಸಿ ಎಂದರೆ ನಮ್ಮ ಮನಸಿಗೆ ಬರುವ ಮೊದಲ ವ್ಯಕ್ತಿ ಸಚಿನ್ ತೆಡೂಲ್ಕರ್ ಇನ್ನು ಎರಡನೆಯದಾಗಿ ಕೋಚ್ ಗ್ಯಾರಿ ಕಿರ್ಸ್ಟನ್. ವ್ಯಕ್ತಿ ಬೇಡ ಯಾವುದಾದರೂ ಶಕ್ತಿಯ ಬಗ್ಗೆ ಹೇಳಿ ಎಂದರೆ ನಮ್ಮ ವಿಲ್ಸನ್ ಗಾರ್ಡನ್ ಶನಿ ಮಾಹಾತ್ಮ ದೇವರ ಬಗ್ಗೆ ಹೇಳಬಹುದು. ಸರಿ ನೀವಾದರೂ ಹೇಳಿಪಾ, ಯಾರದು ಯುವ್ವಿ ಮನಸ್ಸಲ್ಲಿ ಅಷ್ಟೊಂದು ಭದ್ರವಾಗಿ ಪ್ರತಿಷ್ಠಾಪಿಸಿರುವ ದೇವತಾ ಮನುಷ್ಯ ಅಂತ!?
 

Copyright © 2010 ಕ್ರೀಡಾ ಲೋಕ